Allnews : ಮà³�ಂಬೈನಲà³�ಲಿ-100ನೇ-ಶತಕ-ಬಾರಿಸಿದà³�ದಲà³�ಲà
Welcome Guest! Have a informative day

ಮುಂಬೈನಲ್ಲಿ 100ನೇ ಶತಕ ಬಾರಿಸಿದ್ದಲ್ಲಿ ಸಚಿನ್ ಕೈಸೇರಲಿದೆ 100 ಚಿನ್ನದ ನಾಣ್ಯಗಳು!

ಮುಂಬೈ: ಸದ್ಯ ಇಡೀ ದೇಶದ ಕ್ರೀಡಾಭಿಮಾನಿಗಳು ಸಚಿನ್ ತೆಂಡೂಲ್ಕರ್ ಅವರ 100ನೇ ಶತಕ ಸಾಧನೆಯು ಇಂದಲ್ಲ ನಾಳೆ ದಾಖಲಾಗಲಿದೆ ಎಂಬ ನಿರೀಕ್ಷೆಯಿಂದ ಸುಸ್ತಾಗಿ ಬಿಟ್ಟಿದ್ದಾರೆ. ಅತ್ತ ಸಚಿನ್ ಮಾತ್ರ ಇದು ಕೇವಲ ಅಂಕಿ ಮಾತ್ರ ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಣ್ಣಾಗಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅದೇ ನಿಲುವನ್ನು ಸ್ವೀಕರಿಸಿರುವ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಸಹ, ನವೆಂಬರ್ 22ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಆರಂಭವಾಗಲಿರುವ ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಲಿಟ್ಲ್ ಮಾಸ್ಟರ್ ನೂರನೇ ಶತಕದ ಸಾಧನೆ ಮಾಡಿದ್ದಲ್ಲಿ, 100 ಚಿನ್ನದ ನಾಣ್ಯ ನೀಡಿ ಸನ್ಮಾನಿಸಲಿದ್ದೇವೆ ಎಂದು ಘೋಷಿಸಿದೆ....